ಕಾರ್ಯಕ್ರಮಗಳ ವಿವರ
ಬಸವ ಸಂಸ್ಕೃತಿ ಅಭಿಯಾನ ೨೦೨೫
ಬಸವ ಸಂಸ್ಕೃತಿ ಅಭಿಯಾನ ೨೦೨೫ವು ಸತತ ಒಂದು ತಿಂಗಳ ಕಾಲ ಕರ್ನಾಟಕದಲ್ಲಿ ದಿನಕ್ಕೊಂದು ಜಿಲ್ಲೆಗೆ ಪ್ರವಾಸ ಮಾಡಿ, ಅಲ್ಲಿ ವಚನ ಗೋಷ್ಟಿ, ವಿಧ್ಯಾರ್ಥಿ ಮತ್ತು ಸಾರ್ವಜನಿಕರ ಜೋತೆ ವಚನ ಸಂವಾದ ಕಾರ್ಯಕ್ರಮ, ವಚನ ಚಿಂತನೆ, ಪಾದಯಾತ್ರೆ, ನಾಟಕ ಮತ್ತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಉದ್ದೇಶ – ಕರ್ನಾಟಕ ಸರ್ಕಾರ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಶಿಸಿ ಒಂದು ವರ್ಷ ಆಗುವ ನೆನಪಿನೊಂದಿಗೆ ಜನಮಾನಸದ ಹತ್ತಿರ ಹೋಗಿ ಚಿಂತನೆ, ಸಂವಾದ ಮಾಡಿ ಬಸವಾದಿ-ಶರಣರ ತತ್ವಗಳನ್ನು ಮುಟ್ಟಿಸುವುದು. ಈ ಅಭಿಯಾನವು ಸೆಪ್ಟೆಂಬರ್ ೧೨ರಂದು ಧಾರವಾಡ ನಗರಕ್ಕೆ ಆಗಸಮಿಸಿತು. ಬೆಳ್ಳಗ್ಗೆ ವಿಧ್ಯಾರ್ಥಿಗಳ ಜೋತೆ ಮಚನ ಸಂವಾದ, ಧಾರವಾಡದ ಕಲಾಭವನದಿಂದ ಮುರುಘಾಮಠದವೆರೆಗೆ ವಚನ ಸಾಹಿತ್ಯದ ಮೆರವಣಿಗೆ ಮಳೆಯ ನಡುವೆಯೆ ಬೃಹತ ಪಾದಯಾತ್ರೆ ಹಾಗೂ ಸಂಜೆ ಸಾರ್ವಜನಿಕ ಸಮಾವೇಶ, ವಿಷೇಶ ಉಪನ್ಯಾಸ ಮತ್ತು ಜಂಗಮದೆಡೆಗೆ ನಾಟಕದೊಂದಿಗೆ ಮುಕ್ತಾಯವಾಯಿತು.
‘ಶೂನ್ಯ ಸಂಪಾದನೆ ಅನುಭಾವ ಮಾಲಿಕೆ’ – ಡಾ. ಶಂಭು ಹೆಗಡಾಳ
ಶೂನ್ಯ ಸಂಪಾದನೆಯು ಬಸವಾದಿ-ಶರಣರು ಮಾನವ ಕುಲಕ್ಕೆ ಕೊಟ್ಟ ಒಂದು ದೊಡ್ಡ ಕೊಡುಗೆ. ಈ ಶೂನ್ಯ ಸಂಪಾದನೆಯನ್ನು ಧಾರವಾಡದ ಡಾ. ಶಂಭು ಹೆಗಡಾಳ ಅವರು ಉತ್ತಮವಾಗಿ ವಾರಕ್ಕೊಂದು ಸಂಚಿಕೆಯಂತೆ ಸತತ 52 ಸಂಚಿಕೆಗಳ ಮುಖಾಂತರ ನಮಗೆಲ್ಲಾ ಶೂನ್ಯ ಸಂಪಾದನೆಯನ್ನು ಸರಳವಾಗಿ ವಿವರಿಸುತ್ತಾ ಬಂದಿದ್ದಾರೆ ಮತ್ತು ಇನ್ನು ಅನೇಕ ವಾರ ಇದು ಮುಂದುವರಿಯುತ್ತದೆ.
ನಿಜಾಚರಣೆ ಕಾರ್ಯಾಗಾರ
ಬಸವಾದಿ-ಶರಣರ ಎಲ್ಲ ತತ್ವಗಳು ಮಾನವ ಜೀವನವನ್ನು ಕಲ್ಯಾಣಗೊಳೀಸುವತ್ತ ಗಮನ ಹರಿಸಿವೆ. ಈ ತತ್ವಗಳು ಮೂಢನಂಬಿಕೆಗಳನ್ನು, ಅನ್ಯ ಅರ್ಥವಿಲ್ಲದ ಪದ್ಧತಿಗಳನ್ನು ತಿರಸ್ಕರಿಸುತ್ತವೆ. ಈ ಬಸವಾದಿ ಶರಣರ ನಿಜಾಚರಣೆಗಳನ್ನು ಕಾರ್ಯರೂಪಕ್ಕೆ ತರಲು ಪ್ರೊ. ಜಿ.ಬಿ.ಹಳ್ಯಾಳ ಅವರು ಬರೆದ ‘ನಿಜಾಚರಣೆಗಳು’ ಪುಸ್ತಕದಲ್ಲಿ ವಿವರಿಸಿದ ಹಾಗೆ ಮತ್ತು ಬಸವ ಅಧ್ಯಯನ ಮಾಡಿದವರ ಮಾರ್ಗದರ್ಶನದಿಂದ, ಬಸವ ತತ್ವದ ನಿಜಾಚರಣೆಗಳ ಬಗ್ಗೆ ಚರ್ಚೆ, ಚಿಂತನೆ ಮಾಡಲಾಗುತ್ತದೆ. ಈ ನಿಜಾಚರಣೆಗಳನ್ನು ಅನುಷ್ಟಾನಗೊಳಿಸಿ ಪಾಲಿಸುವವರನ್ನು ‘ಕ್ರಿಯಾ ಮೂರ್ತಿ’ಯಂದು ಗುರುತಿಸಿ ಸನ್ಮಾನಿಸಲಾಗುತ್ತದೆ.
ಶ್ರಾವಣ ಮಾಸದ ನಿತ್ಯ ವಚನೋತ್ಸವದ ಮಂಗಲೋತ್ಸವ ೨೦೨೫
ಶ್ರಾವಣ ಮಾಸದ ಅಂಗವಾಗಿ ಸತತ ಒಂದು ತಿಂಗಳ ಕಾಲ ಸುಮಾರು 5೦೦ ಮನೆಗಳಲ್ಲಿ ನಿತ್ಯ -ವಚನೋತ್ಸವವನ್ನು ಧಾರವಾಡ ನಗರದ ಅನೇಕ ಬಡಾವಣೆಗಳಲ್ಲಿ ನಡೆಸಲಾಯಿತು. ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಸವ ಕೇಂದ್ರದ ನಿತ್ಯ ವಚನೋತ್ಸವದ ಮಂಗಲೋತ್ಸವ ಸಮಾರಂಭ ನಡೆಯಿತು.
‘ವಚನ ಪರಿಮಳ – ಭಾಗ ೮’ ಪುಸ್ತಕ ಬಿಡುಗಡೆ
ಬಸವ ಕೇಂದ್ರ ಧಾರವಾಡವು ಪ್ರತಿ ಶ್ರಾವಣ ಮಾಸದ ನಿತ್ಯ ವಚನೋತ್ಸವಕ್ಕೆಂದೆ ಪ್ರತಿ ವರ್ಷ್ ಸಾಹಿತಿಗಳಿಂದ ಒಂದು ವಚನ ಪರಿಮಳ ಪುಸ್ತಕವನ್ನು ಬಿಡುಗಡೆಗೊಳಿಸುತ್ತಾರೆ. ಈ ಪುಸ್ತಕವು 30 ದಿನಗಳ ನಿತ್ಯ ವಚನೋತ್ಸವಕ್ಕೆ ಮಾರ್ಗದರ್ಶಿಯಾಗುತ್ತದೆ. ದಿನಕ್ಕೊಂದು ವಚನದ ಬಗ್ಗೆ ಪರಿಣಿತರ ಅಭಿಪ್ರಾಯವನ್ನು ಕೊಡಲಾಗಿದೆ. ಶರಣರೆಲ್ಲರೂ ಇದನ್ನು ಒದಿ ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಎಲ್ಲರೊಂದಿಗೆ ಚರ್ಚಿಸುತ್ತಾರೆ. ವಚನ ಶ್ರಾವಣದ ನಿತ್ಯ ವಚನೋತ್ಸವದ ಕಾರ್ಯಕ್ರಮದಲ್ಲಿ, ‘ವಚನ ಪರಿಮಳ – ಭಾಗ ೮’ ಪುಸ್ತಕವನ್ನು ಉದ್ಘಾಟಿಸಲಾಯಿತು. ಈ ಪುಸ್ತಕದ ಸಂಪಾದಕರು ಪ್ರೊ. ಜಿ ಎ ತಿಗಡಿ.
ಶ್ರಾವಣ ಮಾಸದ ಅಂಗವಾಗಿ ‘ನಿತ್ಯ ವಚನೋತ್ಸವ’
ಶ್ರಾವಣ ಮಾಸದ ಅಂಗವಾಗಿ ಸತತ ಒಂದು ತಿಂಗಳ ಕಾಲ ಸುಮಾರು 5೦೦ ಮನೆಗಳಲ್ಲಿ ನಿತ್ಯ-ವಚನೋತ್ಸವವನ್ನು ಧಾರವಾಡ ನಗರದ ಅನೇಕ ಬಡಾವಣೆಗಳಲ್ಲಿ ನಡೆಸಲಾಯಿತು. ಪ್ರತಿ ನಿತ್ಯ ಒಂದು ಮನೆಯಲ್ಲಿ ಆ ಬಡಾವಣೆಯವರೆಲ್ಲ ಕೂಡಿ ವಚನ ಪರಿಮಳ-ಭಾಗ ೮ರಲ್ಲಿ ಇರುವಂತೆ ದಿನಕ್ಕೊಂದು ವಚನದ ಚಿಂತನೆಯನ್ನು ಮಾಡುತ್ತಾರೆ. ಬಸವ ಪ್ರಾರ್ಥನೆ, ವಚನ ಗಾಯನ, ವಚನ ಚಿಂತನೆ ಹಾಗೂ ವಚನ ಮಂಗಲದೊಂದಿಗೆ ಅಂದಿನ ವಚನೋತ್ಸವವನ್ನು ಮುಕ್ತಾಯಗೊಳಿಸುತ್ತಾರೆ. ಈ ನಿತ್ಯ-ವಚನೋತ್ಸವದಿಂದ ಪ್ರತಿಯೊಬ್ಬರಿಗೂ ದಿನದಲ್ಲಿ ಒಂದು ಗಂಟೆಯನ್ನು ಅಧ್ಯಾತ್ಮಿಕ ಚಿಂತನೆಗೆ ಮಿಸಲಿಡಲು ಪ್ರೇರೆಪಿಸುತ್ತದೆ ಮತ್ತು ಅವರಿಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹಾಗೂ ಇತರರ ಚಿಂತನೆಗಳನ್ನು ಆಲಿಸುವ ಅವಕಾಶ ಸಿಗುತ್ತದೆ.
ಶಾಲಾ ಮಕ್ಕಳಿಗೆ ವಚನ ಲೇಖನ ಸ್ಪರ್ಧೆ
ಧಾರವಾಡ ಜಿಲ್ಲೇಯ ಶಾಲಾ ಮಕ್ಕಳಿಗೆ ವಚನ ಪುಸ್ತಕ ವಿತರಿಸಿ ನಂತರ ವಚನ ಲೇಖನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
