ಸಮಾಜಕ್ಕೆ ಶರಣ ಪರಂಪರೆಯ ಕೊಡುಗೆ
ಧಾರವಾಡ ಮುರುಘಾಮಠದ ಇತಿಹಾಸ ಮತ್ತು ಕೊಡುಗೆ
ಮೃತ್ಯುಂಜಯ ಅಪ್ಪಗಳು 1916ರಲ್ಲಿ ದಾವಣಗೆರೆಯ ವಿರಕ್ತಮಠದಿಂದ ಧಾರವಾಡದ ಮುರುಘಾಮಠಕ್ಕೆ ಪರಮಪೂಜ್ಯರಾಗಿ ಬರುತ್ತಾರೆ. ಧಾರವಾಡಕ್ಕೆ ಬಂದಾಗ ಅವರಿಗೆ ಸರಿಸುಮಾರು 20-22 ವಯಸ್ಸು ಮಾತ್ರ. ಮೃತ್ಯುಂಜಯ ಅಪ್ಪಗಳ ಮೇಲೆ ಅಥಣಿಯ ಮುರುಘೇಂದ್ರ ಶಿವಯೊಗಿಗಳು ಅಪಾರ ಪ್ರಭಾವಬಿರಿದ್ದರು.
ಅದೇ ಸಮಯದಲ್ಲಿ ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜು(KCD College, Dharwad) ಪ್ರಾರಂಭಗೊಳ್ಳುತ್ತದೆ. ಆಗ ವಿಧ್ಯಾರ್ಥಿಗಳಿಗೆ ಊಟ, ವಸತಿಯ ಸಮಸ್ಯೆ ಆಗಿ, ಪ್ರಾಧ್ಯಾಪಕರೆಲ್ಲ ಮೃತ್ಯುಂಜಯ ಅಪ್ಪಗಳ ಜೋತೆ ಸಮಸ್ಯೆಯನ್ನು ಹಂಚಿಕೊಳುತ್ತಾರೆ. ಆಗ ಮುರುಘಾಮಠ ಆರ್ಥಿಕವಾಗಿ ಸಧ್ರುಡವಗುಲ್ಲದಿದ್ದರು, ಮೃತ್ಯುಂಜಯ ಅಪ್ಪಗಳು 1917 ರಲ್ಲಿ ಮುರುಘಾಮಠದಲ್ಲಿ ಪ್ರಸಾದ ನಿಲಯ ಮತ್ತು ವಿಧ್ಯಾರ್ಥಿ ವಸತಿ ನಿಲಯಗಳನ್ನು(Students Hostel) ದಾನ, ದೇಣಿಗೆಯಿಂದ ನಡೆಸಿ, ವಿಧ್ಯಾರ್ಥಿಗಳಿಗೆ ಹಾಗೂ ಕರ್ನಾಟಕ ವಿಜ್ಞಾನ ಕಾಲೇಜಿಗೆ ಸಹಾಯ ಮಾಡಿದ್ದರು. ಇದರ ಮುಖಾಂತರ ಕರ್ನಾಟಕದಲ್ಲಿ ದಾಸೋಹ-ಪ್ರಸಾದ ಸೇವೆಯ ಪರಂಪರೆಗೆ ನಾಂದಿ ಹಾಡಿದರು.
ಮುಂದೆ 1932 ರಲ್ಲಿ ಧಾರವಾಡ ಮೃತ್ಯುಂಜಯ ಅಪ್ಪಗಳ ಪ್ರಸಾದ ನಿಲಯದ ಪ್ರೇರಣೆಯಿಂದ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪ್ರಸಾದ ನಿಲಯ ಪ್ರಾರಂಭವಾಗುತ್ತದೆ.
ಧಾರವಾಡ ಮಹಾಂತಪ್ಪಗಳ ಒಂದು ಮಾತು – ‘ಅಂದಂದಿನ ಗಳಿಕೆ, ಅಂದಂದಿನ ಬಳಕೆ‘, ಇದರಂತೆ ನಡೆದು ಧಾರವಾಡ ಮುರುಘಾಮಠವನ್ನು ಬೆಳೆಸಿ ಅನೇಕ ಸಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.
ಮೃತ್ಯುಂಜಯ ಅಪ್ಪಗಳು ಅಖಿಲ ಭಾರತ ಶಿವಾನುಭವ ಸಂಸ್ಥೆಯನ್ನು ಶರಣರ ತತ್ವಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದರು. ಅರ್.ಸಿ.ಹೀರೆಮಠ ಅವರು ತಮ್ಮ ಒಂದು ಪುಸ್ತಕದಲ್ಲಿ ಈ ಸಂಸ್ಥೆಯಿಂದ ನಡೆದ ಕಾರ್ಯಗಳನ್ನು ವಿವರಿಸಿ, ‘ಮಾಡರ್ನ ನಲಂದಾ‘ ಎಂಬ ಹೇಸರಿನಿಂದ ಆ ಪುಸ್ತಕವನ್ನು ಬರೆದಿದ್ದಾರೆ. ಅಂದರೆ ಒಂದು ವಿಶ್ವವಿದ್ಯಾಲದ ತರಹ ‘ಅಖಿಲ ಭಾರತ ಶಿವಾನುಭವ ಸಂಸ್ಥೆ‘ಯಿಂದ ಸುಮಾರು 400-500 ಪುಸ್ತಕಗಳು ಪ್ರಕಟಗೊಂಡವು.
ಮುರುಘಾಮಠದಿಂದ ಪುಸ್ತಕ ಪ್ರಕಾಶನಕ್ಕಾಗಿ ‘ಬಾಲಲಿಲಾ ಮಹಾಂತ ಶಿವಯೋಗಿಗಳ ಗ್ರಂಥಮಾಲೆ‘ಯನ್ನು ಪ್ರಾರಂಭಿಸಿದರು.ಮುರುಘಾಮಠದಿಂದ ಒಂದು ಮಾಸಿಕ ಪತ್ರಿಕೆಯಾಗಿ ‘ಸಾವಧಾನ ಪತ್ರಿಕೆ‘ಯನ್ನು ಪ್ರಾರಂಭಿಸಲಾಯಿತು.
ಬಸವ ಜಯಂತಿಯ ಇತಿಹಾಸ
ದಾವಣಗೆರೆಯ ವಿರಕ್ತಮಠದಲ್ಲಿ 1913 ರಲ್ಲಿ ಮೃತ್ಯುಂಜಯ ಅಪ್ಪಗಳು ಹಾಗೂ ಹರ್ಡೆಕರ ಮಂಜಪ್ಪನವರು ಜೊತೆಗೂಡಿ ಸಾರ್ವಜನಿಕವಾಗಿ ‘ಬಸವ ಜಯಂತಿ’ಯನ್ನು ಪ್ರಾರಂಭಿಸಿದರು.
ಅಕ್ಕಮಹಾದೇವಿ ಜಯಂತಿಯ ಇತಿಹಾಸ
ಅಕ್ಕಮಹಾದೇವಿ ಜಯಂತಿಯನ್ನು ಸಹ ಮೃತ್ಯುಂಜಯ ಅಪ್ಪಗಳು ಹಾಗೂ ಹರ್ಡೆಕರ ಮಂಜಪ್ಪನವರು ಜೊತೆಗೂಡಿ ಪ್ರಾರಂಭಿಸಿದರು.
ಬಸವ ಕೇಂದ್ರಗಳ ಸ್ಥಾಪನೆ
ಬಸವಾದಿ-ಶರಣರ ತತ್ವಗಳು ಸದಾ ನಮ್ಮೆಲರ ಜೀವನಕ್ಕೆ ಪ್ರೇರಣೆಯಾಗಿವೆ ಮತ್ತು ಶಾಶ್ವತವಾಗಿ ಮಾನವಕುಲವನ್ನು ಕಲ್ಯಾಣಗೊಳಿಸುತ್ತಳಿರುತ್ತವೆ. ಈ ತತ್ವಗಳು ಮಠಗಳಿಗೆ ಸಿಮಿತವಾಗದೆ, ಮನಗಳನ್ನು ಮತ್ತು ಮನೆಗಳನ್ನು ಮುಟ್ಟಬೇಕೆಂಬ ಆಶಯಗಳೊಂದಿಗೆ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು, ಸುಮಾರು ೨೫ ವರ್ಷಗಳ ಹಿಂದೆ, ಪ್ರತಿ ಜಿಲ್ಲೆಯಲ್ಲೊಂದು ಬಸವ ಕೇಂದ್ರಗಳು ಪ್ರಾರಂಭಗೊಳ್ಳಲಿ ಎಂದು ಪ್ರೋತ್ಸಾಹಿಸಿದ್ದರು. ಅದರ ಪರಿಣಾಮವೇ ಇವತ್ತು ಕರ್ನಾಟಕದ ಪ್ರತಿ ಜಿಲ್ಲೆಯಲ್ಲೊಂದು ಬಸವ ಕೇಂದ್ರ ಮನೆ-ಮನೆಗಳಿಗೆ ಬಸವಾದಿ-ಶರಣರ ತತ್ವಗಳನ್ನು ಬಸವ ಅನುಯಾಯಿಗಳು ಮುಟ್ಟಿಸುತ್ತಿದ್ದಾರೆ.
