ಪರಿಚಯ
ಬಸವ ಕೇಂದ್ರ ಧಾರವಾಡವು ಸತತ ೨೫ ವರ್ಷಗಳಿಂದ ಬಸವ ತತ್ವದ ಪ್ರಚಾರ, ಅನುಭಾವ ಗೋಷ್ಟಿಗಳ ಮೂಲಕ ಶರಣ ತತ್ವದ ಚಿಂತನೆ, ಮನೆ-ಮನೆಗಳಲ್ಲಿ ವಚನೋತ್ಸವವನ್ನು ನಡೆಸಲು ಬಸವಾನುಯಾಯಿಗಳಿಗೆ ಸಹಕಾರ ನೀಡುತ್ತಿದೆ. ಬಸವ ಕೇಂದ್ರದಿಂದ ನಡೆಯುವ ಎಲ್ಲ ಕಾರ್ಯಕ್ರಮಗಳು ‘ಅಂದಂದಿನ ಗಳಿಕೆ ಅಂದಂದಿನ ಬಳಕೆ’ ಎಂಬಂತೆ ಬಸವ ಭಕ್ತರ ದಾಸೋಹದಿಂದಲೇ ನಡೆಸುತ್ತಾ ಬಂದಿದೆ. ಬಸವ ಕೇಂದ್ರವು ಶ್ರಾವಣ ಮಾಸದಲ್ಲಿ ಮನೆ-ಮನೆಗಳಲ್ಲಿ ಮಚನೋತ್ಸವ, ಶಾಲಾ ಮಕ್ಕಳಿಗೆ ವಚನ ಲೇಖನ ಸ್ಪರ್ಧೆ, ಪ್ರತಿ ವಾರ ಶರಣ-ತತ್ವ ಚಿಂತನೆ, ಬಸವ ಸಂಘಟನೆ ಮತ್ತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳುತ್ತ ಬಂದಿದೆ.
ಗುರಿ ಮತ್ತು ದೃಷ್ಟಿ
ವಚನಗಳನ್ನು, ಶರಣರ ತತ್ವಗಳನ್ನು ಉಳಿಸುವುದು, ಪಾಲಿಸುವುದು ಮತ್ತು ಪ್ರಚಾರಿಸುವುದು.
ಬಸವಾದಿ-ಶರಣರ ತತ್ವಗಳನ್ನು ಮನೆ-ಮನೆಗಳಿಗೆ ವಚನೋತ್ಸವ ಮತ್ತು ಅನುಭಾವ ಗೋಷ್ಟಿಗಳ ಮೂಲಕ ಮೂಟ್ಟಿಸುವುದು.
