🌸  ಅರಿವೇ ಗುರು  🌸  ದೇಹವೆ ದೇಗುಲ​ 🌸  ಲಿಂಗ ವ್ಯಸನಿ, ಜಂಗಮ ಪ್ರೇಮಿಯ ಮಾಡಯ್ಯ​  🌸  ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ  🌸  ಮಾತೆಂಬುದು ಜ್ಯೋತಿರ್ಲಿಂಗ   🌸   ಕಾಯಕವೇ ಕೈಲಾಸ   🌸   ಮರಣವೇ ಮಹಾನವಮಿ   🌸  ದಾನದಿಂದ ದಾಸೋಹದ ಕಡೆಗೆ  🌸  ಅಧ್ಯಾತ್ಮದಿಂದ ಅನುಭಾವದ ಕಡೆಗೆ   🌸   ದಯವೇ ಧರ್ಮದ ಮೂಲವಯ್ಯ   🌸    ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ    🌸    ಆಚಾರವೇ ಸ್ವರ್ಗ ಅನಾಚಾರವೇ ನರಕ   🌸   ಬಯಲು ಬಯಲಾಗಿ ಬಯಲಾಯಿತ್ತಯ್ಯಾ   🌸   ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ   🌸   ಅರಿದರೆ ಶರಣ ಮರೆದರೆ ಮಾನವ   🌸  ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ  🌸  ಮಾತೆಂಬುದು ಜ್ಯೋತಿರ್ಲಿಂಗ  🌸  ಪರ ಸತಿ, ಪರ ಧನ​, ಪರ ದೈವಂಗಳಿಗೆರಗದಿಪ್ಪುದೆ ನಿತ್ಯ ನೇಮ​ 🌸  ಅರಿವೇ ಗುರು  🌸  ದೇಹವೆ ದೇಗುಲ​ 🌸  ಲಿಂಗ ವ್ಯಸನಿ, ಜಂಗಮ ಪ್ರೇಮಿಯ ಮಾಡಯ್ಯ🌸  ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ  🌸   ಕಾಯಕವೇ ಕೈಲಾಸ  🌸   ಮರಣವೇ ಮಹಾನವಮಿ   🌸   ದಾನದಿಂದ ದಾಸೋಹದ ಕಡೆಗೆ  🌸  ಅಧ್ಯಾತ್ಮದಿಂದ ಅನುಭಾವದ ಕಡೆಗೆ   🌸   ದಯವೇ ಧರ್ಮದ ಮೂಲವಯ್ಯ   🌸    ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ    🌸    ಆಚಾರವೇ ಸ್ವರ್ಗ ಅನಾಚಾರವೇ ನರಕ   🌸   ಬಯಲು ಬಯಲಾಗಿ ಬಯಲಾಯಿತ್ತಯ್ಯಾ   🌸   ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ   🌸   ಅರಿದರೆ ಶರಣ ಮರೆದರೆ ಮಾನವ   🌸  ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ 🌸  ಪರ ಸತಿ, ಪರ ಧನ​, ಪರ ದೈವಂಗಳಿಗೆರಗದಿಪ್ಪುದೆ ನಿತ್ಯ ನೇಮ​

ಶ್ರೀಗುರು ಬಸವಲಿಂಗಾಯ ನಮಃ

ಶರಣರ ಬರವೆಮಗೆ, ಪ್ರಾಣ ಜೀವಾಳವಯ್ಯ

೧೨ನೇ ಶತಮಾನದಲ್ಲಿಯೇ ನಮ್ಮ ಬಸವಾದಿ-ಶರಣರು ಇಡೀ ಮಾನವಕುಲದ ಏಳಿಗೇಗಾಗಿ ಶುದ್ಧ ಕನ್ನಡದಲ್ಲಿ ನೀಡಿದ ‘ವಚನ ಸಾಹಿತ್ಯ​‘, ಜಗತ್ತಿನ ಮೊಟ್ಟ-ಮೊದಲ ಸಂಸತ್ತು-‘ಅನುಭವ ಮಂಟಪ​’ ಮತ್ತು ವಿಶೇಷವಾಗಿ ಬಸವಣ್ಣವರು ಒಬ್ಬ ನಾಯಕನಾಗಿ ಮಾಡಿದ ಸಾಮಾಜಿಕ ಕ್ರಾಂತಿಯ ಫಲವಾಗಿ ಜಗತ್ತಿಗೆ ಕೊಟ್ಟ ಇಷ್ಟಲಿಂಗ​, ಶರಣ​-ತತ್ವಗಳನ್ನು ಪಡೆದುಕೊಂಡು ಮಾನವಕುವ ಹಾಗೂ ಕನ್ನಡ ಸಾಹಿತ್ಯ ಮತ್ತಷ್ಟು ಶ್ರೀಮಂತಗೊಂಡಿದೆ. ಕುವೆಂಪು ಅವರು ಹೇಳಿದ ಹಾಗೆ ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ ಬಸವಣ್ಣ ಬಂದ. ನಾವೆಲ್ಲರೂ ಶರಣರು ಪರಿಚಯಿಸಿದ ಈ ಲಿಂಗಾಯತ-ತತ್ವ​ದೊಂದಿಗೆ ಆ ಬಯಲಲ್ಲಿ ಬಯಲಾಗುವತ್ತ ಸಾಗೋಣ​. ಶರಣು ಶರಣಾರ್ಥಿಗಳು.

                 ವಚನ ಗಾಯನ – ಶಿವಕುಮಾರ ಮತ್ತು ಮಾನಸ ಪಾಂಚಾಳ

ಬಸವ ಕೇಂದ್ರ ಧಾರವಾಡದ ಪರಿಚಯ

ಬಸವ ಕೇಂದ್ರ ಧಾರವಾಡವು ಸತತ 25 ವರ್ಷಗಳಿಂದ ಬಸವ ತತ್ವದ ಪ್ರಚಾರ, ಶರಣ ತತ್ವದ ಚಿಂತನೆ, ಮನೆ-ಮನೆಗಳಲ್ಲಿ ವಚನೋತ್ಸವವನ್ನು ನಡೆಸಲು ಬಸವನುಯಾಯಿಗಳಿಗೆ ಸಹಕಾರ ನೀಡುತ್ತಿದೆ.

ಪ್ರಸ್ತುತ ಕಾರ್ಯಕ್ರಮಗಳು

● ಬಸವ ಸಂಸ್ಕೃತಿ ಅಭಿಯಾನ 2025ರ​ ಕಾರ್ಯಕ್ರಮವ​ನ್ನು ಸೆಪ್ಟೆಂಬರ್ 12ರಂದು ಹಮ್ಮಿಕೋಳ್ಳಲಾಗಿದೆ

● ಪ್ರತಿ ರವಿವಾರ ಬೆಳ್ಳಿಗ್ಗೆ ಬಸವ ಕೇಂದ್ರದಲ್ಲಿ 'ನಿಜಾಚರಣೆ ಕಾರ್ಯಾಗಾರ' 

● ಬಸವ ಸಮಿತಿ ಸಹಯೋಗದಲ್ಲಿ ಡಾ. ಶಂಭು ಹೆಗಡಾಳ ಅವರಿಂದ 'ಶೂನ್ಯ ಸಂಪಾದನೆ ಅನುಭಾವ ಮಾಲಿಕೆ'

● ಶ್ರಾವಣ ಮಾಸದ ಅಂಗವಾಗಿ ಮನೆ-ಮನೆಗಳಲ್ಲಿ 'ನಿತ್ಯ ವಚನೋತ್ಸವ'

● ಶಾಲಾ ಮಕ್ಕಳಿಗೆ ವಚನ ಲೇಖನ ಸ್ಪರ್ಧೆ

● ನಿತ್ಯ ವಚನೋತ್ಸವದ ಸಮಾರೋಪ ಸಮಾರಂಭ

ಲೇಖನಗಳು

ಪುಸ್ತಕ ಪರಿಚಯ: ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ

[ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ ನಾಲ್ಕು ಮುದ್ರಣಗಳನ್ನು ಕಂಡಿದ್ದು ನಿಜಕ್ಕೂ ಹೆಮ್ಮೆ ಮತ್ತು ಅಭಿಮಾನವೆನಿಸುತ್ತದೆ. ಯಾವುದೇ ಲೇಖಕನ ಒಂದು ಕೃತಿಯ ಒಂದು ಸಾವಿರ ಪ್ರತಿ ಮಾರಾಟವಾಗುವುದು

Read More »

ಶರಣರ​ ವಚನಗಳು

ನುಡಿದರೆ ಮುತ್ತಿನ ಹಾರದಂತಿರಬೇಕು.  ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು. ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯಾ? 

– ಬಸವಣ್ಣ

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ, ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ, ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ, ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ.

– ಅಕ್ಕಮಹಾದೇವಿ

ಹೊನ್ನು ಮಾಯೆ ಎಂಬರು
ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆ ಎಂಬರು
ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆ ಎಂಬರು
ಮಣ್ಣು ಮಾಯೆಯಲ್ಲ, ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರ.

– ಅಲ್ಲಮಪ್ರಭುದೇವರು

ಶರಣರ ಬಗ್ಗೆ ಪರಿಣಿತರ ಅಭಿಪ್ರಾಯ

ಸರ್ವಜ್ಞ

ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ
ಹುಸಿಮಾತನಾಡಿ ಕೇಡದಿರಿ|
ಲಿಂಗಾಯತಕೆ ಬಸವಣ್ಣನೆ ಕರ್ತು
ಸರ್ವಜ್ಞ|

ಹರನೇ ಗುರುವಾಗಿ, ತಾ ಮರ್ತ್ಯಲೋಕಕ್ಕೆ ಬಂದು ಪರಶಿವಲಿಂಗವನು ಕರಕೆ ತಂದು ಕೊಟ್ಟ ಗುರುವೇ ಬಸವಣ್ಣ | ಸರ್ವಜ್ಞ 

ಬಸವ ಪೀಠವು ಎದ್ದು, ಒಸೆದು ನಾಣ್ಯವ ಹುಟ್ಟಿ ಬಸವನ ಮುದ್ರೆ ಮೆರೆದಾವು, ಧರೆಯವಗೆ ವಶವಾಗದಿಹುದೆ, ಸರ್ವಜ್ಞ

 
ರಾಷ್ಟ್ರಕವಿ ಕುವೆಂಪು

ಕಾರ್ತಿಕದ ಕತ್ತಲಲಿ ಆಕಾಶದೀಪವಾಗಿ
ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ
ಎಂಟು ಶತಮಾನಗಳ ಹಿಂದೆ,
ಅಗ್ನಿ ಖಡ್ಗವನಾಂತ ಓ ಅಧ್ಯಾತ್ಮ ಕ್ರಾಂತಿ ವೀರ,
ದೇವದಯೆಯೊಂದು ಹೇ ಧೀರಾವತಾರ,
ಶ್ರೀ ಗುರು ಬಸವೇಶ್ವರಾ!

ಜಿ.ಎಸ್.ಶಿವರುದ್ರಪ್ಪ

ಯಾವ ಯಾವ ಜಡ್ಡುಗಟ್ಟಿದ ಕಾಲಗಳಲ್ಲಿ, ಸೂಕ್ಷ್ಮ ಸಂವೇದನೆ ಉಳ್ಳವರು, ವಿಚಾರವಂತರು ಆದ ಕೆಲವು ಜನ ತಮ್ಮ ಸುತ್ತಣ ಪರಿಸ್ಥಿತಿಯನ್ನು ಮತ್ತು ಅದನ್ನು ನಿಯಂತ್ರಿಸಿಕೊಂಡು ಬಂದ ರೂಢಿಗತವಾದ ವ್ಯವಸ್ಥೆ ಹಾಗೂ ಸಂಪ್ರದಾಯಗಳನ್ನು ಪ್ರಶ್ನಿಸಲು ತೊಡಗುತ್ತಾರೋ, ಪ್ರತಿಭಟಿಸಲು ತೊಡಗುತ್ತಾರೋ
ಅಂತಹ ಕಾಲಗಳನ್ನು ಸಂಕ್ರಮಣ ಕಾಲಗಳೆಂದು
ಕರೆಯಬಹುದು.ಕನ್ನಡ ನಾಡಿನ ಸಾಂಸ್ಕೃತಿಕ
ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಇಂತಹ ಒಂದು ಸಂಕ್ರಮಣ ಕಾಲ.

ನಮ್ಮನ್ನು ಸಂಪರ್ಕಿಸಿ

ಆತ್ಮಿಯ ಶರಣ ಬಂಧುಗಳೇ,

ನೀವು ಬಸವ ಕೇಂದ್ರ ಧಾರವಾಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ದಾಸೋಹ ಸೇವೆ ಸಲ್ಲಿಸಲು ನಮ್ಮನ್ನು ಸಂಪರ್ಕಿಸಿ.

Scroll to Top